ನೇಗ್ರೋ -
ಈ ಹೆಸರಿನ ಮೂರು ನದಿಗಳು ಇವೆ. ದಕ್ಷಿಣ ಅರ್ಜಿಂಟೇನದಲ್ಲಿರುವುದು ರೀಯೊ ನೇಗ್ರೋ. ಚಿಲಿಯ ಎಲ್ಲೆಯ ಬಳಿ ಹುಟ್ಟುವ ನ್ಯೂಕೇನ್ ಮತ್ತು ಲೀಮೈ ನದಿಗಳು ನ್ಯೂಕೇನ್ ಪ್ರದೇಶದಲ್ಲಿ ಸಂಗಮಿಸಿದಾಗ ಈ ನದಿಯಾಗುತ್ತದೆ. ಇದು ಪೂರ್ವ ಅಗ್ನೇಯಾಭಿಮುಖವಾಗಿ ಉತ್ತರ ಪ್ಯಾಟಗೋನಿಯದ ಮೂಲಕ ಹರಿದು ರೀಯೊ ನೇಗ್ರೋ ಪ್ರಾಂತ್ಯವನ್ನು ಹಾದು ಅಟ್ಲಾಂಟಿಕ್ ಸಾಗರವನ್ನು ಸೇರುತ್ತದೆ. ಇದರ ಉದ್ದ ಸುಮಾರು 644.8 ಕಿಮೀ. ನದಿಯ ಕೆಳಭಾಗದ 400 ಕಿಮೀ. ಮಾತ್ರ ನೌಕಾಯಾನ ಯೋಗ್ಯ. ಈ ನದಿಯ ನೀರು ಜಲವಿದ್ಯುತ್ ಉತ್ಪಾದನೆಗೆ ಹಾಗೂ ಧಾನ್ಯ, ಹಣ್ಣು, ದ್ರಾಕ್ಷಿ ಬೆಳೆಗೆ ಬಳಕೆಯಾಗುತ್ತದೆ.

	ಬ್ರಜಿಲ್‍ನ ದಕ್ಷಿಣದ ಪರ್ವತ ಪ್ರದೇಶದಲ್ಲಿ, ಬಷೇ ನಗರದ ಪೂರ್ವಕ್ಕೆ ಇದೇ ಹೆಸರಿನ ಇನ್ನೊಂದು ನದಿ ಉಗಮಿಸಿ ನೈಋತ್ಯಾಭಿಮುಖವಾಗಿ ಹರಿದು ಉರಗ್ವೆಯನ್ನು ಪ್ರವೇಶಿಸುತ್ತದೆ. ಈ ನದಿಗೆ ಪಾಸೋ ಡೇ ಲಸ್ ಟೋರಸ್ ಪಟ್ಟಣದ ಬಳಿ ಕಟ್ಟೆ ಕಟ್ಟಿ ದೊಡ್ಡ ಜಲಾಶಯವೊಂದನ್ನು ನಿರ್ಮಿಸಲಾಗಿದೆ. ಮುಂದೆ ರಿಂಕಾನ್ ಡೇ ಬೇಗಾರ್ನದ ಬಳಿ ಇನ್ನೊಂದು ಕಟ್ಟೆ ನಿರ್ಮಿಸಲಾಗಿದೆ ಅನಂತರ ನದಿ ಪಶ್ಚಿಮಾಭಿಮುಖವಾಗಿ ಹರಿದು ಉರಗ್ವೇ ನದಿಯನ್ನು ಕೂಡುತ್ತದೆ. ಈ ನದಿ 800 ಕಿಮೀ. ಉದ್ದವಿದ್ದರೂ ಅದರ ಮುಖಪ್ರದೇಶದಿಂದ 70 ಕಿಮೀ. ಮಾತ್ರ ನೌಕಾಯಾನ ಯೋಗ್ಯ. ಎಂಬಾಲ್ಸೆ ಸರೋವರದ ಬಳಿ ಬೃಹತ್ ಜಲ ವಿದ್ಯುತ್ ಸ್ಥಾವರ ನಿರ್ಮಿಸಲಾಗಿದೆ.

ಅಮೆಜಾನ್ ನದಿಯ ಪ್ರಮುಖ ಉಪನದಿಯೊಂದಕ್ಕೆ ಇದೇ ಹೆಸರಿದೆ. ಇದರ ಪ್ರಮುಖ ತರೆ ತೊರೆಗಳು ವ್ಯಾಯುಪೇಸ್ ಮತ್ತು ಗೀಯಾನ. ಇವು ಕೊಲಂಬಿಯದ ದಟ್ಟವಾದ ಕಾಡುಗಳಲ್ಲಿ ಉಗಮಿಸುತ್ತವೆ. ಗೀಯಾನ ಪೂರ್ವಾಭಿಮುಖವಾಗಿ ಹರಿದು ಈಶಾನ್ಯ ಮತ್ತು ಅಗ್ನೇಯಾಭಿಮುಖವಾಗಿ ಬಾಗಿ, ಕೊಲಂಬಿಯ ಮತ್ತು ವೆನಿಜಿû್ವೀಲ ದೇಶಗಳ ಗಡಿಯಾಗಿ ಪರಿಣಮಿಸಿ, ಸ್ಯಾನ್ ಕಾರ್ಲಸ್ ಡೇ ರೀಯೊ ನೇಗ್ರೋ ಬಳಿ ಬ್ರ್ಯಾeóÉೂೀ ಕಾಸಿಕ್ಯಾರೀ ನದಿಯನ್ನು ಕೂಡಿಕೊಂಡ ಮೇಲೆ ಇದು ರೀಯೊ ನೇಗ್ರೋ ಎಂಬ ಹೆಸರು ತಳೆದು ಬ್ರಜಿûಲನ್ನು ಪ್ರವೇಶಿಸುತ್ತದೆ. ಅನಂತರ ಇದು ಸ್ಥೂಲವಾಗಿ ದಕ್ಷಿಣ ಅಗ್ನೇಯಾಭಿಮುಖವಾಗಿ ಸಾಗುತ್ತದೆ. ಇದಕ್ಕೆ ಬ್ರಾಂಕೋ ಮುಂತಾದ ಹಲವು ಉಪನದಿಗಳು ಸೇರಿಕೊಳ್ಳುತ್ತವೆ. ಮನೌಸ್ ನಗರದ ಬಳಿ ಇದು ಸೂಲೀಮೋಯಿಷ್ ನದಿಯೊಂದಿಗೆ ಸಂಗಮಿಸಿ ಅಮೆeóÁನ್ ನದಿಯಾಗಿ ಪರಿಣಮಿಸುತ್ತದೆ. ಈ ನದಿಯ ಉದ್ದ 2,000 ಕಿಮೀ. ಬ್ರಜಿûಲ್‍ನಲ್ಲಿ ಇದರ ಉದ್ದ ಸುಮಾರು 1,360 ಕಿಮೀ. ಈ ನದಿಯ ತೀರದಲ್ಲಿ ಜನವಸತಿ ವಿರಳವಾಗಿದ್ದರೂ ಇದು ಪ್ರಮುಖ ಸಾರಿಗೆ ಮಾರ್ಗವಾಗಿದೆ. ನದಿಯಂಚಿನ ಜವುಗು ಪ್ರದೇಶಗಳ ಜೈವಿಕ ದ್ರವ್ಯದ ಕೊಳೆಯುವಿಕೆಯಿಂದಾಗಿ ಈ ನದಿಯ ನೀರಿನ ಬಣ್ಣ ಹೊಳೆಯುವ ಕಪ್ಪು. ಮಕ್ಕಲು ತುಂಬಿದ ಹಳದಿಯ ಬಣ್ಣದ ಬ್ರ್ಯಾಂಕೋ ಹಾಗೂ ಅಮೆeóÁನ್ ನದಿಗಳ ನೀರಿನ ಬಣ್ಣಕ್ಕಿಂತ ಇದು ಭಿನ್ನವಾದ್ದು.
(ಎಸ್.ಎಸ್.ಎ.ಯು.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ